Posts

  ಸ್ನಾತಕ / ಸ್ನಾತಕೋತ್ತರ ಎಂದರೇನು ?  ಅಮೇರಿಕಾ, ಯೂರೋಪ್ ನಲ್ಲಿ ಶೈಕ್ಷಣಿಕ ವರ್ಷ ಜೂನ್ ಗೆ ಮುಗಿಯುತ್ತದೆ. ಜೂನ್ ತಿಂಗಳಲ್ಲಿ ಪ್ಲೇ ಸ್ಕೂಲ್ ನಿಂದ ಹಿಡಿದು ಯೂನಿವರ್ಸಿಟಿ ಗಳ ತನಕ ಎಲ್ಲ ಶೈಕ್ಷಣಿಕ ಸಂಸ್ಥೆಗಳು ತಮ್ಮ ಶಾಲೆಯಿಂದ ಉತ್ತೀರ್ಣರಾಗಿ ಹೊರಹೋಗುವ ಮಕ್ಕಳಿಗೆ ಪದವಿ ಪ್ರದಾನ ಮಾಡುವ "Graduation Ceremony"  ಯನ್ನು ಇಟ್ಟುಕೊಳ್ಳುತ್ತವೆ . ಆಗಸ್ಟ್ ನಂತರವೇ ಮುಂದಿನ ತರಗತಿಗಳು ಪ್ರಾರಂಭವಾಗುವುದು. ಪ್ರಾಚೀನ ಭಾರತದಲ್ಲಿ ಉಪನಯನ ಕ್ರಿಯೆ ನಡೆಸಿ ಗುರುಕುಲಕ್ಕೆ ತೆರಳಿದ ವಿದ್ಯಾರ್ಥಿಯು ಸುಮಾರು ಹನ್ನೆರಡು ವರ್ಷಗಳ ಕಾಲ ವಿದ್ಯಾಭ್ಯಾಸ ಮುಗಿಸಿದ ನಂತರ ನಡೆಸುವ ಸಮಾರಂಭವನ್ನು "ಸಮಾವರ್ತನ" ಎಂದು ಕರೆಯುತ್ತಿದ್ದರು. ಹೋಮ, ಗುರುದಕ್ಷಿಣೆ ಇತ್ಯಾದಿ ಗುರುಕುಲದಲ್ಲಿ ನಡೆಯುವ ಕಾರ್ಯಕ್ರಮದ ನಂತರ - ತಿರುಗಿ ಮನೆಗೆ ಬಂದಾಗ ನಡೆಯುವ ದೊಡ್ಡ ಕಾರ್ಯಕ್ರಮವೆಂದರೆ ಮಂತ್ರೋಕ್ತವಾಗಿ - ಚೆನ್ನಾಗಿ ಎಣ್ಣೆ, ಅರಸಿನ ಹಚ್ಚಿ ಬಿಸಿನೀರಲ್ಲಿ ಮಾಡಿಸುವ ಮಹಾ ಸ್ನಾನ  .  ಈಗಿನ ಕಾಲದಲ್ಲೂ ಪದವೀಧರರಿಗೆ "ಸ್ನಾತಕ" ಹಾಗೂ ಅದಕ್ಕಿಂತ ಮುಂದೆ ಓದಿದವರಿಗೆ "ಸ್ನಾತಕೋತ್ತರ ಪದವೀಧರ" ಎನ್ನುತ್ತೇವಲ್ಲಾ - "ಸ್ನಾತಕ" ಎಂದರೆ ಸ್ನಾನ ಮಾಡಿದ ವ್ಯಕ್ತಿ ಎಂದರ್ಥ !! ಗುರುಕುಲ ಎಂದರೆ ವಿದ್ಯಾರ್ಥಿಗೆ ಕಷ್ಟದ ಜೀವನ , ಮನೆಯ ಹಾಗೂ ಹೊರಗಿನ ಎಲ್ಲಾ ಕೆಲಸ ಮಾಡಬೇಕು ಜೊತೆಗೆ ವ್ಯಾಸಂಗವನ್ನೂ ಮಾಡಬೇಕು. ಸ್ನಾನ ...
ರಾಮನ ಜನನದ ಬಗ್ಗೆ - ರಾಮ ನವಮಿ ಸ್ಪೆಷಲ್ !  ಭಗವಾನ್ ಶ್ರೀರಾಮನು ಕೋಸಲ ದೇಶದ ರಾಜನಾದ ದಶರಥ ಹಾಗೂ ಅವನ ಹಿರಿಯ ರಾಣಿ ಕೌಸಲ್ಯಾದೇವಿಯ ಪ್ರಥಮ ಪುತ್ರನಾಗಿ ತ್ರೇತಾಯುಗದಲ್ಲಿ ಅಯೋಧ್ಯಾ ನಗರದಲ್ಲಿ ಹುಟ್ಟಿದನು . ಈ ದಿನವನ್ನು ಹಿಂದೂಗಳು "ರಾಮ ನವಮಿ" ಎಂಬುದಾಗಿ ಆಚರಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು. ರಾಮನ ಜನ್ಮದ ಬಗ್ಗೆ ಕೆಲವು ಸ್ವಾರಸ್ಯಕರವಾದ ಮಾಹಿತಿಗಳು ಇಲ್ಲಿವೆ. ದಶರಥನಿಗೆ  ಕೌಸಲ್ಯಾ , ಸುಮಿತ್ರಾ ಮತ್ತು ಕೈಕೇಯಿ ಎಂಬ ಮೂವರು ರಾಣಿಯರಿದ್ದರೂ ಗಂಡು ಸಂತಾನವಿಲ್ಲದಿದ್ದರಿಂದ "ಪುತ್ರಕಾಮೇಷ್ಠಿ ಯಜ್ಞ" ವನ್ನು ಮಾಡುತ್ತಾನೆ. ಯಜ್ಞದ ಕೊನೆಯಲ್ಲಿ ಅಗ್ನಿ ದೇವಾನು ಪ್ರಸನ್ನನಾಗಿ ಪಾಯಸದ ತಟ್ಟೆಯೊಂದನ್ನು ಕೊಟ್ಟನು . ದಶರಥನು ಪಾಯಸದ ಅರ್ಧ ಭಾಗವನ್ನು ಕೌಸಲ್ಯೆಗೂ, ಅದರ ಅರ್ಧ ಭಾಗ ಅಂದರೆ ಕಾಲು ಭಾಗವನ್ನು ಕೈಕೇಯಿಗೂ , ಹಾಗೂ ಕೈಕೇಯಿಯ ಪಾಲಿನ ಅರ್ಧ ಅಂದರೆ ಎಂಟನೇ ಒಂದು ಭಾಗದಷ್ಟು ಪಾಯಸವನ್ನು ಸುಮಿತ್ರೆಗೆ ನೀಡಿದನು . ಆಮೇಲೂ ಉಳಿದ ಎಂಟನೇ ಒಂದು ಭಾಗದಷ್ಟು ಪಾಯಸವನ್ನು ಪುನಃ ಸುಮಿತ್ರೆಗೇ ಕೊಟ್ಟನು. ಇದಾದ ಒಂದು ವರ್ಷದೊಳಗೆ ದಶರಥನಿಗೆ ನಾಲ್ಕು ಗಂಡು ಮಕ್ಕಳು ಜನಿಸುತ್ತಾರೆ. ರಾಮನ ಜನನ ಕೌಸಲ್ಯೆಯ ಗರ್ಭದಿಂದ ಚೈತ್ರಮಾಸದ ಶುಕ್ಲ ಪಕ್ಷ ನವಮಿಯಂದು ಪುನರ್ವಸು ನಕ್ಷತ್ರದಂದು ಆಯಿತು. ಅದರ ಮರುದಿನ ಅಂದರೆ ಶುಕ್ಲ ಪಕ್ಷ ಪುಷ್ಯಾ ನಕ್ಷತ್ರದಲ್ಲಿ ಕೈಕೇಯಿಯು ಭರತನಿಗೆ ಜನ್ಮವಿತ್ತಳು. ಅದರ ಮಾರನೇ ದಿನ , ಚೈತ್ರ ಮಾಸ ...