ರಾಮನ ಜನನದ ಬಗ್ಗೆ - ರಾಮ ನವಮಿ ಸ್ಪೆಷಲ್ ! ಭಗವಾನ್ ಶ್ರೀರಾಮನು ಕೋಸಲ ದೇಶದ ರಾಜನಾದ ದಶರಥ ಹಾಗೂ ಅವನ ಹಿರಿಯ ರಾಣಿ ಕೌಸಲ್ಯಾದೇವಿಯ ಪ್ರಥಮ ಪುತ್ರನಾಗಿ ತ್ರೇತಾಯುಗದಲ್ಲಿ ಅಯೋಧ್ಯಾ ನಗರದಲ್ಲಿ ಹುಟ್ಟಿದನು . ಈ ದಿನವನ್ನು ಹಿಂದೂಗಳು "ರಾಮ ನವಮಿ" ಎಂಬುದಾಗಿ ಆಚರಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು. ರಾಮನ ಜನ್ಮದ ಬಗ್ಗೆ ಕೆಲವು ಸ್ವಾರಸ್ಯಕರವಾದ ಮಾಹಿತಿಗಳು ಇಲ್ಲಿವೆ. ದಶರಥನಿಗೆ ಕೌಸಲ್ಯಾ , ಸುಮಿತ್ರಾ ಮತ್ತು ಕೈಕೇಯಿ ಎಂಬ ಮೂವರು ರಾಣಿಯರಿದ್ದರೂ ಗಂಡು ಸಂತಾನವಿಲ್ಲದಿದ್ದರಿಂದ "ಪುತ್ರಕಾಮೇಷ್ಠಿ ಯಜ್ಞ" ವನ್ನು ಮಾಡುತ್ತಾನೆ. ಯಜ್ಞದ ಕೊನೆಯಲ್ಲಿ ಅಗ್ನಿ ದೇವಾನು ಪ್ರಸನ್ನನಾಗಿ ಪಾಯಸದ ತಟ್ಟೆಯೊಂದನ್ನು ಕೊಟ್ಟನು . ದಶರಥನು ಪಾಯಸದ ಅರ್ಧ ಭಾಗವನ್ನು ಕೌಸಲ್ಯೆಗೂ, ಅದರ ಅರ್ಧ ಭಾಗ ಅಂದರೆ ಕಾಲು ಭಾಗವನ್ನು ಕೈಕೇಯಿಗೂ , ಹಾಗೂ ಕೈಕೇಯಿಯ ಪಾಲಿನ ಅರ್ಧ ಅಂದರೆ ಎಂಟನೇ ಒಂದು ಭಾಗದಷ್ಟು ಪಾಯಸವನ್ನು ಸುಮಿತ್ರೆಗೆ ನೀಡಿದನು . ಆಮೇಲೂ ಉಳಿದ ಎಂಟನೇ ಒಂದು ಭಾಗದಷ್ಟು ಪಾಯಸವನ್ನು ಪುನಃ ಸುಮಿತ್ರೆಗೇ ಕೊಟ್ಟನು. ಇದಾದ ಒಂದು ವರ್ಷದೊಳಗೆ ದಶರಥನಿಗೆ ನಾಲ್ಕು ಗಂಡು ಮಕ್ಕಳು ಜನಿಸುತ್ತಾರೆ. ರಾಮನ ಜನನ ಕೌಸಲ್ಯೆಯ ಗರ್ಭದಿಂದ ಚೈತ್ರಮಾಸದ ಶುಕ್ಲ ಪಕ್ಷ ನವಮಿಯಂದು ಪುನರ್ವಸು ನಕ್ಷತ್ರದಂದು ಆಯಿತು. ಅದರ ಮರುದಿನ ಅಂದರೆ ಶುಕ್ಲ ಪಕ್ಷ ಪುಷ್ಯಾ ನಕ್ಷತ್ರದಲ್ಲಿ ಕೈಕೇಯಿಯು ಭರತನಿಗೆ ಜನ್ಮವಿತ್ತಳು. ಅದರ ಮಾರನೇ ದಿನ , ಚೈತ್ರ ಮಾಸ ...
Posts
Showing posts from April, 2025