Posts

Showing posts from June, 2025
  ಸ್ನಾತಕ / ಸ್ನಾತಕೋತ್ತರ ಎಂದರೇನು ?  ಅಮೇರಿಕಾ, ಯೂರೋಪ್ ನಲ್ಲಿ ಶೈಕ್ಷಣಿಕ ವರ್ಷ ಜೂನ್ ಗೆ ಮುಗಿಯುತ್ತದೆ. ಜೂನ್ ತಿಂಗಳಲ್ಲಿ ಪ್ಲೇ ಸ್ಕೂಲ್ ನಿಂದ ಹಿಡಿದು ಯೂನಿವರ್ಸಿಟಿ ಗಳ ತನಕ ಎಲ್ಲ ಶೈಕ್ಷಣಿಕ ಸಂಸ್ಥೆಗಳು ತಮ್ಮ ಶಾಲೆಯಿಂದ ಉತ್ತೀರ್ಣರಾಗಿ ಹೊರಹೋಗುವ ಮಕ್ಕಳಿಗೆ ಪದವಿ ಪ್ರದಾನ ಮಾಡುವ "Graduation Ceremony"  ಯನ್ನು ಇಟ್ಟುಕೊಳ್ಳುತ್ತವೆ . ಆಗಸ್ಟ್ ನಂತರವೇ ಮುಂದಿನ ತರಗತಿಗಳು ಪ್ರಾರಂಭವಾಗುವುದು. ಪ್ರಾಚೀನ ಭಾರತದಲ್ಲಿ ಉಪನಯನ ಕ್ರಿಯೆ ನಡೆಸಿ ಗುರುಕುಲಕ್ಕೆ ತೆರಳಿದ ವಿದ್ಯಾರ್ಥಿಯು ಸುಮಾರು ಹನ್ನೆರಡು ವರ್ಷಗಳ ಕಾಲ ವಿದ್ಯಾಭ್ಯಾಸ ಮುಗಿಸಿದ ನಂತರ ನಡೆಸುವ ಸಮಾರಂಭವನ್ನು "ಸಮಾವರ್ತನ" ಎಂದು ಕರೆಯುತ್ತಿದ್ದರು. ಹೋಮ, ಗುರುದಕ್ಷಿಣೆ ಇತ್ಯಾದಿ ಗುರುಕುಲದಲ್ಲಿ ನಡೆಯುವ ಕಾರ್ಯಕ್ರಮದ ನಂತರ - ತಿರುಗಿ ಮನೆಗೆ ಬಂದಾಗ ನಡೆಯುವ ದೊಡ್ಡ ಕಾರ್ಯಕ್ರಮವೆಂದರೆ ಮಂತ್ರೋಕ್ತವಾಗಿ - ಚೆನ್ನಾಗಿ ಎಣ್ಣೆ, ಅರಸಿನ ಹಚ್ಚಿ ಬಿಸಿನೀರಲ್ಲಿ ಮಾಡಿಸುವ ಮಹಾ ಸ್ನಾನ  .  ಈಗಿನ ಕಾಲದಲ್ಲೂ ಪದವೀಧರರಿಗೆ "ಸ್ನಾತಕ" ಹಾಗೂ ಅದಕ್ಕಿಂತ ಮುಂದೆ ಓದಿದವರಿಗೆ "ಸ್ನಾತಕೋತ್ತರ ಪದವೀಧರ" ಎನ್ನುತ್ತೇವಲ್ಲಾ - "ಸ್ನಾತಕ" ಎಂದರೆ ಸ್ನಾನ ಮಾಡಿದ ವ್ಯಕ್ತಿ ಎಂದರ್ಥ !! ಗುರುಕುಲ ಎಂದರೆ ವಿದ್ಯಾರ್ಥಿಗೆ ಕಷ್ಟದ ಜೀವನ , ಮನೆಯ ಹಾಗೂ ಹೊರಗಿನ ಎಲ್ಲಾ ಕೆಲಸ ಮಾಡಬೇಕು ಜೊತೆಗೆ ವ್ಯಾಸಂಗವನ್ನೂ ಮಾಡಬೇಕು. ಸ್ನಾನ ...